== ಎಐಎಡಿಎಂಕೆ ಅಧಿಕಾರಕ್ಕೆ == ಭಾರತದ ರಾಜ್ಯದ ತಮಿಳುನಾಡು ರಾಜ್ಯದ ವಿಧಾನಸಭೆಗೆ ಹದಿನಾಲ್ಕನೆಯ ಚುನಾವಣೆ 13 ಏಪ್ರಿಲ್ 2011 ರಂದು ನಡೆಯಿತು. 234 ಕ್ಷೇತ್ರಗಳ ಸದಸ್ಯರನ್ನು ಚುನಾಯಿಸಬೇಕಾಗಿತ್ತು . ಫಲಿತಾಂಶಗಳನ್ನು ಮೇ 13 ರಂದು ಬಿಡುಗಡೆ ಮಾಡಲಾಯಿತು. 2011 ಎರಡು ಪ್ರಮುಖ ಪಕ್ಷಗಳು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಇವುಗಳ ಬಹು ರಾಜಕೀಯ ಪಕ್ಷಗಳ ಒಕ್ಕೂಟಗಳು ಚುನಾವಣೆ ಎದುರಿಸಿದವು. ಚುನಾವಣೆಯಲ್ಲಿ ರಾಜ್ಯದಲ್ಲಿ ಅತ್ಯಧಿಕ ಮತದಾನದಾಖಲಾಯಿತು. ಚುನಾವಣೆಯಲ್ಲಿ ಒಟ್ಟು ಮತದಾರರ 77,8% ಮತ ಚಲಾಯಿಸಿದರು. ಹಿಂದಿನ 1967ರ 76,57% ರ ಚುನಾವಣೆ ಮತದಾನವನ್ನು ಮೀರಿಸಿತ್ತು. ಮುಂದೆ ಎಐಎಡಿಎಂಕೆ ಒಕ್ಕೂಟ ಚುನಾವಣೆಯಲ್ಲಿ 203 ಕ್ಷೇತ್ರಗಳಲ್ಲಿ ಗೆದ್ದು; ಎಐಎಡಿಎಂಕೆ ಪಕ್ಷ ಕೇವಲ 150 ಸ್ಥಾನಗಳನ್ನು ಗಳಿಸುವ ಮೂಲಕ ಸರಳ ಬಹುಮತ ಗಳಿಸಿತು. ಅದರ ಒಕ್ಕೂಟದ ಪಾಲುದಾರರ ಬೆಂಬಲ ಇಲ್ಲದೆಯೇ ಸರ್ಕಾರ ರಚಿಸಲು ಎಐಎಡಿಎಂಕೆ ಅರ್ಹ ಆಯಿತು. ಡಿಎಂಡಿಕೆ ಒಕ್ಕೂಟ 29 ಸ್ಥಾನಗಳಲ್ಲಿ ಜಯ ಸಾಧಿಸಿತು. ಡಿಎಂಕೆ 23 ಸ್ಥಾನಗಳನ್ನು ಗೆದ್ದು ಅಧಿಕೃತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಆಯ್ಕೆ ಮಾಡಿಕೊಂಡಿತು. ಜೆ.ಜಯಲಲಿತಾ 33 ಮಂತ್ರಿಗಳ ಜೊತೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮೇ 16,2011 ರಂದು ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ಗವರ್ನರ್ ಸುರ್ಜಿತ್ ಸಿಂಗ್ ಬರ್ನಾಲಾ ಪ್ರಮಾನ ವಚನ ಬೋಧಿಸಿದರು. == ಚುನಾವಣೆ ಎದುರಿಸಿದ ಒಕ್ಕೂಟಗಳು == ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಸಮ್ಮಿಶ್ರ ಒಕ್ಕೂಟ ==== ದ್ರಾವಿಡ ಮುನ್ನೇತ್ರ ಕಳಗಂ ಸಮ್ಮಿಶ್ರ ಒಕ್ಕೂಟ ==== == ಪ್ರಣಾಳಿಕೆ == ವಿಧಾನಸಭೆಯಲ್ಲಿ ಎರಡು ದೊಡ್ಡ ಪಕ್ಷಗಳ ಮ್ಯಾನಿಫೆಸ್ಟೊ ಡಿಎಂಕೆಯ ಪ್ರಣಾಳಿಕೆಯ ಭರವಸೆಗಳು: ಚುನಾವಣೆಯಲ್ಲಿ- 'ಡಿಎಂಕೆಯ ಅಧ್ಯಕ್ಷ ಸಿ.ಎಮ್.ಕರುಣಾನಿಧಿ ನೀಡುತ್ತಾರೆ' ಎಂದು ತಿಳಿಸಿದ ಚುನಾವಣಾ ಪ್ರಣಾಳಿಕೆಯ ಬಿಡುಗಡೆ: ಎಲ್ಲಾ ಮಹಿಳೆಯರಿಗೆ ಉಚಿತ ಬೀಸುವ ಗ್ರೈಂಡರ್ ಅಥವಾ ಮಿಕ್ಸರ್ ಮತ್ತು ಕಾಲೇಜು ವಿದ್ಯಾರ್ಥಿಗಳಿ ಉಚಿತ ಲ್ಯಾಪ್'ಟಾಪ್. ಗ್ರಾಮೀಣ ಯೋಜನೆಗಳು ಮತ್ತು, ಕೊಯಿಮತ್ತೂರು ಮತ್ತು ಮಧುರೈಗೆ ಮೆಟ್ರೋ ರೈಲು. ಎಐಎಡಿಎಂಕೆಯ ಪ್ರಣಾಳಿಕೆಯ ಭರವಸೆಗಳು: ಪಡಿತರ ಕಾರ್ಡ್ ಹೊಂದಿರುವವರಿಗೆ ಉಚಿತ ಅಕ್ಕಿ 20 ಕೆಜಿ. ೧೧ನೇ ತರಗತಿಗಳ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಉಚಿತ. ಬಿಪಿಎಲ್ ಕುಟುಂಬಗಳಿಗೆ ಉಚಿತ ಖನಿಜ ನೀರು, ಮಿಕ್ಸರ್- ಗ್ರೈಂಡರ್,ಮತ್ತು ಚನ್ನೈಗೆ ಮಾನೋರೈಲು . == ಫಲಿತಾಂಶ == == ನೋಡಿ == ಭಾರತದಲ್ಲಿನ ಚುನಾವಣೆಗಳು ಭಾರತದ ಚುನಾವಣೆಗಳು 2016 ತಮಿಳುನಾಡು ವಿಧಾನಸಭೆ ಚುನಾವಣೆ ೨೦೧೬ == ಉಲ್ಲೇಖ == ". . 16 2011. 3 ". . 21 2011. () ".[[೧]] ( . 25 2011.) . 4 2011. ", ". . 9 2011. ". . 13 2011. 13 2011.ತಮಿಳುನಾಡು